kerala-logo

ಕೊನೆಗೂ ದರ್ಶನ್ ರನ್ನು ಭೇಟಿಯಾದ ಅಮ್ಮ ಹಾಗೂ ತಮ್ಮ


ಬೆಂಗಳೂರು ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಡಿ ಬಾಸ್ ದರ್ಶನ್ ಅವರನ್ನು ಕೊನೆಗೂ ಅವರ ಅಮ್ಮ ಮೀನ ತೂಗುದೀಪ್ ಹಾಗೂ ಸಹೋದರ ದಿನಕರ್ ತೂಗುದೀಪ್ ಭೇಟಿ ಮಾಡಿದ್ದಾರೆ.
ದರ್ಶನ್ ಅವರು ಪರಪ್ಪ  ಅಗ್ರಹಾರ ಜೈಲು ಸೇರಿ ಇಂದಿಗೆ 10 ದಿನ. ಯಾರ ಭೇಟಿಗೂ ಒಪ್ಪದ ದರ್ಶನ್ ತಾಯಿ ಹಾಗೂ ಸಹೋದರ ಬಂದರೆ ಒಳಗೆ ಬಿಡಿ ಎಂದಿದ್ದರು. ಅದರಂತೆ ಇಂದು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಹಾಗೂ ಸಹೋದರ ದಿನಕರ್ ತೂಗುದೀಪ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಜೊತೆಗಿದ್ದರು.
ನಟ ದರ್ಶನ್‌ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದರು. ಜೈಲಿನಲ್ಲಿ ನಟ ದರ್ಶನ್‌ ನೋಡಿ ತಾಯಿ ಮೀನಾ ಭಾವುಕರಾಗಿದ್ದಾರೆ. ದರ್ಶನ್‌ ರನ್ನು ಅಪ್ಪಿ ಮೀನಾ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಸಹೋದರ ದಿನಕರ್‌ ದರ್ಶನ್‌ ಗೆ ಧೈರ್ಯ ತುಂಬಿದ್ದಾರೆ. ಸಹೋದರ ಜೊತೆಗೆ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

Kerala Lottery Result
Tops