kerala-logo

ನಟ ದರ್ಶನ್ ಅವರಿಗೆ ಬೆನ್ನು ನೋವಿಗೆ ಸರ್ಜರಿ ಮಾಡಲು ಬಿಜಿಎಸ್ ವೈದ್ಯರ ತಂಡ ನಿರ್ಧಾರ


ಬೆಂಗಳೂರು; ತೀವ್ರ ಬೆನ್ನುನೋವಿನಿಂದಾಗಿ ಮಧ್ಯಂತರ ಜಾಮೀನು ಪಡೆದು ಸದ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಅವರಿಗೆ  ಬೆನ್ನು ನೋವಿಗೆ ಆಪರೇಷನ್ ಮಾಡಲು ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ನಿರ್ಧರಿಸಿದೆ ಎನ್ನಲಾಗಿದೆ.
ತೀವ್ರ ಬೆನ್ನು ನೋವಿನಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಅವರನ್ನು ವೈದ್ಯರು ವಿವಿಧ ಸ್ಕ್ಯಾನ್ ಗೆ ಒಳಪಡಿಸಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ತೀರ್ಮಾನ ಮಾಡಿದ್ದಾರೆ.
ಎರಡ್ಮೂರು ದಿನಗಳಲ್ಲಿ ನಟ ದರ್ಶನ್ ಗೆ ಆಪರೇಷನ್ ಮಾಡಲು ವೈದ್ಯರು ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ ಈಗಾಗಲೇ ಹಲವು ಟೆಸ್ಟ್ ಗಳನ್ನು ನಡೆಸಲಾಗಿದ್ದು, ಬೆನ್ನು ನೋವಿಗೆ ಆಪರೇಷನ್ ಮಾಡಲೇಬೇಕು ಎಂದು ನಿರ್ಧರಿಸಲಾಗಿದ್ದು, ವೈದ್ಯಕೀಯ ವರದಿ, ಚಿಕಿತ್ಸೆ ವರದಿಯನ್ನು ವೈದ್ಯರು ಸಿದ್ಧಪಡಿಸಲಿದ್ದು, ವರದಿಯನ್ನು ದರ್ಶನ್ ಪರ ವಕೀಲರು ಕೋರ್ಟ್ ಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

Kerala Lottery Result
Tops