kerala-logo

ನಟ ದರ್ಶನ್ ಗೆ ತಾತ್ಕಾಲಿಕ ರಿಲೀಫ್;  ಡಿ ಬಾಸ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ


ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮೇಲಿ ಹೊರಗಿರುವ ನಟ ದರ್ಶನ್ ಗೆ ಹೈಕೋರ್ಟ್ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಕೋರ್ಟ್ ಆದೇಶ ನೀಡೋವರೆಗೂ ಬೇಲ್ ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ದರ್ಶನ್ ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಇವತ್ತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ್ರು. ದರ್ಶನ್ ಮಧ್ಯಂತರ ಬೇಲ್ ನ ಷರತ್ತು ಉಲ್ಲಂಘಿಸಿಲ್ಲ ಎಂದು ವಾದ ಮಂಡಿಸಿದ್ರು. ಅಲ್ಲದೇ ಡಿ.11ಕ್ಕೆ ದರ್ಶನ್ ಗೆ ಸರ್ಜರಿ ಫಿಕ್ಸ್ ಆಗಿದೆ, ಈಗ ಚಿಕಿತ್ಸೆ ನೀಡಲಾಗ್ತಿದೆ ಎಂದು ತಿಳಿಸಿದ್ರು.  ವಾದ ಆಲಿಸಿದ ನ್ಯಾಯಾಧೀಶರು ಮುಂದಿನ ಆದೇಶ ನೀಡೋವರೆಗೂ ಬೇಲ್ ವಿಸ್ತರಣೆ ಮಾಡಿ  ಆದೇಶ ನೀಡಿದೆ.

Kerala Lottery Result
Tops