ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುವುದು ಸಾಬೀತಾದ ಹಿನ್ನೆಲೆ ಅವರನ್ನು ಇಂದು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಯಿತು.
ಬಳ್ಳಾರಿ ಜೈಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ದರ್ಶನ್ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಳ್ಳಲಾಯಿತು. ಬಳಿಕ ಕೊರಳಿನಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಬೆಳ್ಳಿ ಕಡಗವನ್ನು ತೆಗೆಸಿದ್ದಾರೆ.
ಪೊಲೀಸರು ಬೆಂಗಳೂರು – ತುಮಕೂರು – ಚಳ್ಳಕೆರೆ – ಮೊಳಕಾಲ್ಮುರು – ರಾಂಪುರ ಮಾರ್ಗವಾಗಿಯೇ ಬಳ್ಳಾರಿಗೆ ದರ್ಶನ್ ಅವರನ್ನು ಕರೆತಂದ್ರು. ಅನಂತಪುರ ತಲುಪುತ್ತಿದ್ದಂತೆ ನಟ ದರ್ಶನ್ ಅವರನ್ನು ಬೊಲೆರೋ ವಾಹನದಿಂದ ಟಿಟಿಗೆ ಶಿಫ್ಟ್ ಮಾಡಲಾಯಿತು. ಸದ್ಯ ಡಿ ಬಾಸ್ ಬಳ್ಳಾರಿ ದಾಸನಾಗಿದ್ದಾರೆ.