ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋಟ್ ನ.28 ಗುರುವಾರಕ್ಕೆ ಮುಂದೂಡಿದೆ.
ನ.26 ಮಂಗಳವಾರದಂದು ಆರೋಪಿ ದರ್ಶನ್ ಪರ ಸಿವಿ ನಾಗೇಶ್ ಅವರು ಪ್ರಬಲವಾದ ಅಂಶಗಳೊಂದಿಗೆ ತಮ್ಮ ವಾದವನ್ನು ಮಂಡಿಸಿದ್ದಾರೆ.
`ಪೊಲೀಸರು ದರ್ಶನ್ ಅವರ ಹಣವನ್ನು ಸೀಜ್ ಮಾಡಿದ್ದಾರೆ. ಆದರೆ ಇದನ್ನು ಅವರು ಸಾಕ್ಷ್ಯನಾಶಕ್ಕಾಗಿ ಬಳಸಿದ್ದಾರೆ ಎಂದು ನಮೂದಿಸಲಾಗಿದೆ. ಮೋಹನ್ ರಾಜ್ ರಿಂದ 38 ಲಕ್ಷ ರೂ. ಪಡೆಯಲಾಗಿತ್ತು. ಮೊದಲೇ ಕೊಲೆ ಆಗುತ್ತದೆ ಎಂದು ಅದನ್ನು ಸಂಗ್ರಹಿಸಿ ಇಡಲಾಗುತ್ತದೆಯೇ?,’ ಎಂದು ಅವರು ವಾದದ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
ವಾದವನ್ನು ಆಲಿಸಿದ ನ್ಯಾ. ವಿಶ್ವಜಿತ್ ಶೆಟ್ಟಿ ಪೀಠವು ಕಾಲಾವಕಾಶ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ.28 ಗುರುವಾರದಂದು ಮುಂದೂಡಿದ್ದಾರೆ.
