kerala-logo

ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್‌ ವಿಚಾರಣೆ ಅಂತ್ಯ; ಜಾಮೀನು ಭವಿಷ್ಯ ಬುಧವಾರದಂದು ನಿರ್ಧಾರ


ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಅ. 29 ಮಂಗಳವಾರದಂದು ಹೈಕೋರ್ಟ್‌ನಲ್ಲಿ ನಡೆದಿದ್ದು,ರೋಗಿಯ ಪರಿಸ್ಥಿತಿಯನ್ನು ಅನುಮಾನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.
ದರ್ಶನ್‌ ಹೈಕೋರ್ಟ್‌ಗೆ ಅನಾರೋಗ್ಯ ಕಾರಣದಿಂದಾಗಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದೆ.
ವಕೀಲ ಸಿವಿ ನಾಗೇಶ್‌ ದರ್ಶನ್‌ ಪರ ವಾದ ಮಂಡಿಸಿದ್ದು, ದರ್ಶನ್‌ ಬೆನ್ನುಮೂಳೆ ಎಂಆರ್‌ ಐ ಸ್ಕ್ಯಾನ್‌ ಮಾಡಿದ್ದಾರೆ. ರೋಗಿಯ ಬೆನ್ನಿನ ನರದ L5, S1 ಡಿಸ್ಕ್‌ ನೂನ್ಯತೆ ಕಂಡು ಬಂದಿದೆ. ಡಿಸ್ಕ್‌ ನಲ್ಲಿನ ಸಮಸ್ಯೆಯಿಂದಾಗಿ ರಕ್ತಪರಿಚಲನೆದಲ್ಲಿ ತೊಂದರೆ ಆಗುತ್ತಿದೆ. ಹಾಗಾಗಿ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದು ಪಾರಂಪಾರಿಕ ಚಿಕಿತ್ಸೆಯಿಂದ ಪರಿಹಾರ ಆಗುವುದಿಲ್ಲ. ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಿರುವ ಅನೇಕ ಉದಾಹರಣೆಗಳಿವೆ. ಈ ಪ್ರಕರಣ ಕೂಡ ಜಾಮೀನು ನೀಡಲು ಅರ್ಹವಾಗಿದೆ ಎಂದು ಡಿಕೆ ಶಿವಕುಮಾರ್‌ ಅವರ ಪ್ರಕರಣವನ್ನು ಉಲ್ಲೇಖಿಸಿ ನಾಗೇಶ್‌ ವಾದ ಮಂಡಿಸಿದ್ದಾರೆ.
ವಿಚಾರಧೀನ ಕೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ. ಮುಂದೆ ಸಮಸ್ಯೆ ಆದರೆ ಅದನ್ನು ಸರಿಪಡಿಸಲಾಗುವುದಿಲ್ಲ. ಹಳೆಯ ಎಂಆರ್‌ ಐ ಸ್ಕ್ಯಾನಿಂಗ್‌ ವರದಿಯನ್ನು ಹೊರತುಪಡಿಸಿದರೆ, ಜೈಲಿಗೆ ಸೇರಿದ ಬಳಿಕ ಬಂದಿರುವ ವರದಿಯನ್ನು ಪರಿಗಣಿಸಬೇಕಲ್ವಾ? ಎಂದು ಜಡ್ಜ್‌ ಪ್ರಶ್ನಿಸಿದ್ದಾರೆ. ಅಷ್ಟೇಅಲ್ಲದೇ ಸರ್ಜರಿಗೆ ಎಷ್ಟು ದಿನ, ಯಾವಾಗ ಬೇಕೆಂದು  ವೈದ್ಯರು ಹೇಳಿಲ್ಲ, ನಿಮಗೆ ಎಷ್ಟು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಬೇಕು ಎಂದಿರುವ ಜಡ್ಜ್ ಮಾತಿಗೆ, ಇದನ್ನು ಆಸ್ಪತ್ರೆಗೆ ದಾಖಲಾದ ಬಳಿಕವೇ ಹೇಳಬೇಕು. ಆರಂಭದಲ್ಲಿ 3 ತಿಂಗಳು ಜಾಮೀನು ನೀಡಿ ಎಂದು ನಾಗೇಶ್‌ ಹೇಳಿದ್ದಾರೆ.
ಚಿಕಿತ್ಸೆಯನ್ನು ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲು ಆಕ್ಷೇಪಣೆ ಸರಿಯಲ್ಲ. ಮೆಡಿಕಲ್‌ ಎಮರ್ಜೆನ್ಸಿ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ನಾಗೇಶ್‌ ಹೇಳಿದ್ದಾರೆ.
ಇನ್ನು ಪ್ರಕರಣದ ಕುರಿತಂತೆ ಎಸ್‌ ಪಿಪಿ ಮೆಡಿಕಲ್‌ ಬೋರ್ಡ್‌ ಅಭಿಪ್ರಾಯವಿಲ್ಲದೆ ಮಧ್ಯಂತರ ಜಾಮೀನು ನೀಡಬಾರದು ಎಂದು ದೆಹಲಿಯ ಅಸಾರಾಂ ಬಾಪು ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಮೆಡಿಕಲ್‌ ಬೋರ್ಡ್‌ ಅಭಿಪ್ರಾಯವಿಲ್ಲದೆ  ಜಾಮೀನು ನೀಡಿರುವ ಕರ್ನಾಟಕದ ಹೈಕೋರ್ಟ್‌ ಪ್ರಕರಣಗಳಿವೆ ದೆಹಲಿಯ ಉದಾಹರಣೆ ಅಗತ್ಯವಿಲ್ಲವೆಂದು ನಾಗೇಶ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಹೈಕೋರ್ಟ್ ರೇಣುಕಾಸ್ವಾಮಿ ಪ್ರಕರಣದ ವಾದ- ಪ್ರತಿವಾದಗಳನ್ನು ಆಲಿಸಿದ ನಂತರ ಅ.30 ಬುಧವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ.

Kerala Lottery Result
Tops