ಬಳ್ಳಾರಿ ಜೈಲು ಸೇರಿದ್ರೂ ಮುಗಿದಿಲ್ಲ ನಟ ದರ್ಶನ್ ಗೆ ಸಂಕಷ್ಟ ತಪ್ಪಿಲ್ಲ. ಡಿ ಬಾಸ್ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಸಂಬಂಧ ನಟ ದರ್ಶನ್ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿದ್ದು, ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ರೌಡಿ ಶೀಟರ್ ಬೇಕರಿ ರಘು ಜೊತೆಗೆ ಬೆಡ್ ಮೇಲೆ ಕುಳಿತಿದ್ದ ದರ್ಶನ್ ಅವರ ಫೋಟೋ ವೈರಲ್ ಆಗಿತ್ತು ಈ ಹಿನ್ನೆಲೆಯಲ್ಲಿ ಆ ಫೋಟೋಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಜೈಲು ಅಧಿಕಾರಿಗಳು ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಈ ದೂರಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿಲ್ಲ. ಬದಲಾಗಿ ದರ್ಶನ್ ವಿರುದ್ಧ ಈಗಾಗಲೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಈ ದೂರನ್ನು ಸೇರಿಸಿಕೊಂಡು ತನಿಖೆ ನಡೆಸಲು ಸೂಚನೆ ನೀಡಲಾಗಿದೆ.
