kerala-logo

ಬಳ್ಳಾರಿ ವಿಮ್ಸ್ ಆಸ್ಪತ್ರೆ ಆವರಣದಲ್ಲಿ ನಟ ದರ್ಶನ್ ಕೈ ಹಿಡಿದು ಎಳೆದ ಅಭಿಮಾನಿ; ಗರಂ ಆದ ಡಿ ಬಾಸ್ ಮಾಡಿದ್ದೇನು?


ಬಳ್ಳಾರಿ;  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭಾರೀ ಬೆನ್ನುನೋವಿನ ಹಿನ್ನೆಲೆ  ನಿನ್ನೆ MRI ಸ್ಕ್ಯಾನಿಂಗ್ ಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ  ಆಸ್ಪತ್ರೆಯಿಂದ ಹೊರ ಬರೋ ವೇಳೆ ಹುಚ್ಚು ಅಙಿಮಾನಿಯೊಬ್ಬ ದರ್ಶನ್ ಕೈ ಹಿಡಿದು ಎಳೆದಿದ್ದಾನೆ. ಪೊಲೀಸ್ ಭದ್ರತೆ ನಡುವೆಯೂ ದರ್ಶನ್ ಕೈ ಹಿಡಿದ ಅಭಿಮಾನಿ ಹುಚ್ಚಾಟ ಮೆರೆದಿದ್ದಾನೆ.
ಅಭಿಮಾನಿ ವರ್ತನೆಗೆ ಕೋಪಗೊಂಡ ಡಿ ಬಾಸ್ ದರ್ಶನ್ ಅವರು ಕೋಪಗೊಂಡಿದ್ದಾರೆ. ಸಿಟ್ಟಿನಿಂದ ಆತನನ್ನು ಗುರಾಯಿಸಿ ದರ್ಶನ್ ಮುಂದಕ್ಕೆ ಸಾಗಿದ್ದಾರೆ.ಬಳಿಕ ಪೊಲೀಸರ ಸರ್ಪಗಾವಲಿನಲ್ಲಿ ನಟ ದರ್ಶನ್ ಅವರು ಜೈಲಿಗೆ ತೆರಳಿದ್ದಾರೆ.

Kerala Lottery Result
Tops