kerala-logo

ಸದ್ಯಕ್ಕಿಲ್ಲ ದಾಸನಿಗೆ  ಜಾಮೀನು ಭಾಗ್ಯ; ಜಾಮೀನು ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿಕೆ


ಬೆಂಗಳೂರು: ಚಿತ್ರದುರ್ಗದ  ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಮಧ್ಯಂತರ ಜಾಮೀನು ಮೇಲಿರುವ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಸರಕಾರದ ಪರ ಹಿರಿಯ ವಕೀಲರಾದ ಪ್ರಸನ್ನಕುಮಾರ ಪ್ರಬಲವಾದ ಮಂಡಿಸಿ, ಕೋರ್ಟ್ ನ ಗಮನ ಸೆಳೆದರು.
ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿ ನಾಲ್ಕು ವಾರ ಕಳೆಯಲು ಬಂದರೂ ಈವರೆಗೆ ಚಿಕಿತ್ಸೆ ಪಡೆದಿಲ್ಲ ಎಂದು ವೈದ್ಯರ ವರದಿಯಲ್ಲಿರುವ ಲೋಪಗಳ ಕುರಿತು ನ್ಯಾಯಾಲಯದ ಗಮನ ಸೆಳೆದರು. ಶಸ್ತ್ರಚಿಕಿತ್ಸೆ ಯಾಕೆ ಮಾಡಿಸಿಲ್ಲ ಎಂದು ವಾದ ಮಂಡಿಸಿದರು.
ನಟ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆದು ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರ ಮೆಡಿಕಲ್ ಬೇಲ್ ರದ್ದು ಮಾಡಲು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿಕೆ ಮಾಡಿದರು.

Kerala Lottery Result
Tops