ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6,106 ನ್ನು ನೀಡಲಾಗಿತ್ತು. ಆ ಸಂಖ್ಯೆಯನ್ನು ಡಿ ಬಾಸ್ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡಿದ್ದರು.ತಮ್ಮ ಗಾಡಿಗಳ ಮೇಲೆ ಹಾಕಿಸಿಕೊಂಡಿದ್ದರು.
ಇದೀಗ ದರ್ಶನ್ ಬಳ್ಳಾರಿ ಜೈಲು ಸೇರಿದ್ದು ಅಲ್ಲಿ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಿದ್ದಾರೆ.ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ನೀಡಿರುವ 511 ಕೈದಿ ನಂಬರ್ ನ್ನು ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದು, ಆಟೋ , ಬೈಕ್ ಸೇರಿದಂತೆ ತಮ್ಮ ವಾಹನಗಳ ಮೇಲೆ ಕೈದಿ ನಂ.511 ಎಂದು ಸ್ಟಿಕ್ಕರ್ ಹಾಕಿಸಿಕೊಳ್ಳುತ್ತಿದ್ದಾರೆ.ಈ ಮೂಲಕ ದರ್ಶನ್ ಎಲ್ಲಿದ್ರೂ ಹೇಗಿದ್ರೂ ಅವರ ಮೇಲಿನ ಅಭಿಮಾನ ಕಮ್ಮಿಯಾಗಲ್ಲ ಎಂದು ತೋರಿಸುತ್ತಿದ್ದಾರೆ.